ಉತ್ತರ ಪಕ್ಷ: 1. ವಾದದಲ್ಲಿ ಒಂದು ವಿಷಯವನ್ನು ಕುರಿತು ಪ್ರತಿಪಕ್ಷೀಯನಿಂದ ಮಂಡಿತವಾದ, ನೈಜವಲ್ಲದ, ಪೂರ್ವಪಕ್ಷರೂಪವಾದ ವಿಚಾರ ಪರಂಪರೆಯನ್ನು ಯುಕ್ತಿ ಪ್ರಮಾಣಾದಿಗಳಿಂದ ಸಕಾರಣವಾಗಿ ಖಂಡಿಸಿ ನೈಜವಾದ ಸಿದ್ಧಾಂತವನ್ನು ಪ್ರತಿಪಾದಿಸಿ ಸ್ಥಾಪಿಸುವುದು.
2. ಮೀಮಾಂಸಾಶಾಸ್ತ್ರದಲ್ಲಿ ಐದು ಅಂಗಗಳಿಂದ ಕೂಡಿದ ವಾಕ್ಯಸಮುದಾಯ. ರೂಪ ಅಧಿಕರಣಗಳಲ್ಲಿ ಬರುವ ವಿಷಯ, ವಿಶಯ (ಸಂಶಯ), ಪೂರ್ವಪಕ್ಷ, ಉತ್ತರ, ನಿರ್ಣಯಗಳೆಂಬ ಐದು ಅವಯವಗಳಲ್ಲಿ ನಾಲ್ಕನೆಯದು.
3. ಚಾಂದ್ರಮಾನ ತಿಂಗಳುಗಳನ್ನು ಶುಕ್ಲಪಕ್ಷ ಕೃಷ್ಣಪಕ್ಷ ಎಂದು ಎರಡಾಗಿ ವಿಭಾಗ ಮಾಡಿದ್ದಾರೆ. ಇದರಲ್ಲಿ ಕೃಷ್ಣಪಕ್ಷದ ಪ್ರಥಮ ತಿಥಿಯಿಂದ ಅಮಾವಾಸ್ಯೆ ತಿಥಿ ಪುರ್ತಿ ಇರುವ ಉತ್ತರ ಮಾಸಾರ್ಧ ರೂಪ ಪಕ್ಷ.	(ಎಸ್.ಎನ್.ಕೆ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ